Thursday, January 6, 2011

ಹಾಸ್ಯಗಳು

ಪ್ರೀತಿ ಕಡಿಮೆ ಆಗ್ತಾ ಇದೆರಮಾ-- ಬರ್ತಾ ಬರ್ತಾ ನನ್ನ ಗಂಡನಿಗೆ
ನನ್ನ ಮೇಲೆ ಪ್ರೀತಿ ಕಡಿಮೆ ಆಗ್ತಾ ಇದೆ.

ಉಮಾ-- ಹೇಗೆ ಹೇಳುತ್ತಿ?
ರಮಾ-- ಮೊದಲೆಲ್ಲ ಕಾಫಿ ತಗೊಂಡು ಬಂದು ನನ್ನನ್ನು ಎಬ್ಬಿಸ್ತಿದ್ರು,
ಈಗೇನಪ್ಪ ಅಂದರೆ ಎಬ್ಬಿಸಿ ಕಾಫಿ ಮಾಡು ಅಂತಾರೆ."


ಪಂಚರ್ ಆಗಿದೆ .ಡ್ರೈವರ್ ; ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ .
ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ
.


ಒಹ್ ಅತ್ತೆ ಮಾವಹೆಂಡತಿ ; (ಮನೆ ಹೊರಗೆ ೨ ಮಂಗ ಇರೋದನ್ನು ನೋಡಿ ) ರೀ ನಿಮ್ ನೆಂಟರು ಬಂದಿದಾರೆ ಹೋಗಿ ಮಾತನಾಡಿಸಿ.
ಗಂಡ ; ಬಾಗಿಲು ತೆರೆದು) ಒಹ್ ಅತ್ತೆ ಮಾವ ಯಾವಾಗ ಬಂದ್ರಿ?ಒಳಗೆ ಬನ್ನಿ.....

ಹನಿಗವನಗಳು

ಪ್ರತಿಯೊಂದಕ್ಕೂ                               

ಇಂಗ್ಲೀಷ್ ಉಗುಳುವ

ನಮ್ಮ ಹೆಂಗೆಳೆಯರಲ್ಲಿ

ನೀವು ಎಲ್ಲಿಯವರೆಂದು

ಕೇಳಿದರೆ ಹೇಳುವರು

WE
ದೇಶಿಯರು.


2.ಅವಾಂತರ     
                                  
ಕಾಲೇಜು ದಿನಗಳಲಿ

ನನ್ನನ್ನು ಕಂಡಾಗ ಮಾಡುತ್ತಿದ್ದಳು ಹಾಯ್

ಪ್ರೇಮ ಬೆಳೆಸಿ,ಮದುವೆಯಾಗುವೆನೆಂದಾಗ

ಎರಡು ವರ್ಷ ಕಳೆಯಲಿ ಎಂದಳಾಕೆ

ವರುಷ ಕಳೆದು ಮನೆಗೆ

ಹೋದೆ ನಾ, ಆಗ ಹೇಳಿದಳು

ನಾನೀಗ ಎರಡು ಮಕ್ಕಳ ತಾಯಿ.!!

ಸವಿನೆನಪು

ಮರೆತೇನಂದರ ಮರೆಯಲಿ ಹ್ಯಾಂಗ: "ನೆನಪುಗಳೇ ಕಾಡದಿರಿ please"

ನಿನ್ನೊಂದಿಗೆ ಕಳೆದ ದಿನಗಳು ಮರೆಯಲು ಸಾಧ್ಯವೇ? ನಿನ್ನ ಜೊತೆ ಕಳೆದ ಆ ಸುಂದರ ದಿನಗಳ ಸವಿನೆನಪುಗಳು, ಆ ಸುಂದರ ಸಂಜೆಗಳ ಒಡನಾಟ, ಆ ತುಂಟಾಟ... ಆ ನೆನಪುಗಳೇ ಹಾಗೆ ಬಿಟ್ಟು ಬಿಡದೆ ಕಾಡುತ್ತವೆ.
ನೆನಪುಗಳೇ ನೀವೇಕೆ ಹೀಗೆ? ಆಫೀಸಿನಲ್ಲಿ ದುಡಿದು ದಣಿದ ಕಣ್ಣುಗಳಿಗೆ ವಿಶ್ರಾಂತಿ ಕೊಡಲೆಂದು ಸ್ವಲ್ಪ ಕಣ್ಣರೆಪ್ಪೆ ಮುಚ್ಚಿದರೆ ಸಾಕು, ದಾಳಿ ಆರಂಭ. "ನೆನಪುಗಳೇ ಕಾಡದಿರಿ please". ಹೀಗೆನ್ನಲು ಕೂಡಾ ಭಯ.!!!
ನಾನು ಹಾಗೆ ಹೇಳಿದೆನೆಂದು ನೀವು ಮುನಿಸಿಕೊಂಡು ಬರದೇ ಹೋದರೆ?, ನಾನು ನನಗೆ ಮತ್ತೆ ಸಿಗದೇ ಕಳೆದು ಹೋಗಬಹುದು. ನಾನು "ನಾನೇ" ಎಂಬುದನ್ನು ಜ್ಞಾಪಿಸ ಲಾದರು ನೀವು ತಿರುಗಿ ಬರಬೇಕು. ಆದರೂ ಇಷ್ಟೊಂದು ಕಾಡದಿರಿ please. ನಾನು ಯಾರೆಂಬುದನ್ನು ಜ್ಞಾಪಿಸುತ್ತಾ, ನಾನೇನಾಗಬೇಕೊ ಅದನ್ನು ಮರೆಯಿಸದಿರಿ, ನನ್ನ ದಾರಿ ತಪ್ಪಿಸದಿರಿ ನೆನಪುಗಳೇ... ಅರ್ಜೆಂಟಾಗಿ ನಾನು ಏನೋ ಆಗಬೇಕಾಗಿದೆ, ಏನೋ ಸಾಧಿಸಬೇಕಾಗಿದೆ. ದೊಡ್ಡ ಊರಿಗೆ ಹೋದವನು ದೊಡ್ಡದಾಗಿ ಏನೋ ಸಾಧಿಸುತ್ತಾನೆಂದು ಮನೆಯಲ್ಲಿ ಎಲ್ಲರೂ "ಕನಸು" ಕಾಣುತ್ತಿದ್ದಾರೆ, ಅವರ ಕನಸುಗಳನ್ನು ಕೊಲ್ಲದಿರಿ ನೆನಪುಗಳೇ...
ಹಾಗೆಂದು ಬರದೇ ಹೋಗದಿರಿ, ನೀವಲ್ಲದೇ ಈ ಊರಲ್ಲಿ ನನಗಾರು ಹೇಳಿ? ಹೊಸ ಊರಲ್ಲಿ ಹೊಸ ಪರಿಚಯಗಳಾಗಬೇಕು, ಹೊಸ ಗೆಳೆತನ ಬೆಳೆಯಲೇಬೇಕು ಆದರೆ ಅದು ಹಳೆಯ ಗೆಳೆತನದ ಸಾವಲ್ಲ. ನೆನಪುಗಳೇ ದಯವಿಟ್ಟು ಮುನಿಯದಿರಿ, ಮುನಿದು ನನ್ನ ನೂಯಿಸದಿರಿ. ಈ ಹೊಸ ಗೆಳೆಯರು ಕೊಡಾ ಯಾವೊತ್ತೊ ಮುಂದೊಂದು ದಿನ ನಿಮ್ಮೊಡನೆ ಸೇರಿ ಮತ್ತೆ ನನ್ನನ್ನೇ ಕಾಡುತ್ತೀರಿ. ಕೊನೆಯಲ್ಲಿ ಒಂಟಿಯಾಗುವನು ನಾನೇ. "ನೆನಪುಗಳೇ ಕಾಡದಿರಿ please".
"ಬಾಳ ದಾರಿಯಲಿ ಬೇರೆಯಾದರೂ, ಚಂದಿರ ಬರುವನು ನಮ್ಮ ಜೊತೆ,
ಕಾಣುವೆನು ಅವನಲಿ ನೀನ್ನನೇ...
ಇರಲಿ ಗೇಳೆಯಾ... ಈ ಅನುಭಂದ ಹೀಗೆ ಸುಮ್ಮನೇ..."

Geleya

ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

  ಏನೋ ಗೊತ್ತಿಲ್ಲ ೫ ನಿಮಿಷ ಟೈಮ್ ಸಿಕ್ಕರೂ  ಮನಸ್ಸು ಹಿಂದೆ ಓಡುತ್ತೆ .ಎಲ್ಲೋ ನಾ ಕಳೆದ ಬಾಲ್ಯ ಧುತ್ತನೆ ಕಣ್ಮುಂದೆ ಬರುತ್ತೆ. ಇವಾಗಿನ ನನ್ನ ಸ್ಥಿತಿ ನೋಡಿ ಅಣಕಿಸಿದಂತೆ ಆಗುತ್ತೆ. ಎಲ್ಲಿ ಹೋಯ್ತು ಆ   ದಿನಗಳು . .......?ಮನಸಾರೆ ನಕ್ಕು ತುಂಬ ದಿನಾನೇ ಆಗೋಯ್ತು .
       ದಿನ ಓಡ್ತಿದೆ ಅದರ ಕಾಲಿಗೆ ಕಟ್ಟಿಕೊಡವಳ ಹಾಗೆ ನಾನು ಓಡ್ತಿತಿದೇನೆ.ಬೇಡದ  ಜಂಜಾಟಗಳೊಂದಿಗೆ ನಾನೆಲ್ಲೋ ಕಳೆದು ಹೋಗ್ತಿದ್ದೇನೆ ಅನಿಸ್ತಿದೆ. ಅಳುವುದಕ್ಕೂ ಟೈಮ್ ಇಲ್ಲ. ನನ್ನೊಳಗೆ ನಾನು ಮಾತನಾಡದೆ ಎಷ್ಟೋ ಕಾಲ ಆಗಿದೆ.
       ಎಷ್ಟು ವಿಚಿತ್ರ ಅಲ್ವಾ ನಾವು ...... ಕೈಲೊಂದು ಮೊಬೈಲ್  ಎದ್ರುಗಡೆ ಕಂಪ್ಯೂಟರ್  ಇದ್ದರೆ ಸಾಕು ಪ್ರಪಂಚಾನೇ  ಮರೆತು ಬಿಡ್ತಿವಿ.    ಅದೂ  ಸಾಲದೆ  ಲವ್ ಮಾಡ್ದೆ ಇದ್ದರೆ  ಲೈಫ್ ಇಲ್ಲ ಅನ್ನುವ ಹಾಗೇ ವರ್ತಿಸ್ತಿವಿ.ಇದ್ದೆಲ್ಲ  ಯಾಕೆ ಬೇಕು  ಈ ಹುಚ್ಚು ಮನಸ್ಸಿಗೆ........? ಕೆಲವೊಂದು ಪ್ರಶ್ನೆಗಳಿಗೆ  ಉತ್ರಾನೆ  ಯಾಕಿಲ್ಲ .....? ಅಥವಾ ನಾನ್ ಹುಡುಕ್ತಾ ಇರೋ ದಾರಿನೇ  ಸರಿ ಇಲ್ವಾ.......?
       ಪುನ: ನನಗೆ ನನ್ನ ಬಾಲ್ಯ ಬೇಕನಿಸ್ತಿದೆ.  ಅಮ್ಮ ನ ಸೆರಗಿನ ಹಿಂದೆ ಗುಬ್ಬಿ ಮರಿಯ ಹಾಗೇ ಅಡಗಿಕೊಂಡಿದ್ದು,  ತಮ್ಮನ ಜೊತೆ  ಪ್ರೀತಿ ತುಂಬಿದ ಜಗಳ , ರಾತ್ರಿ ಮಲಗುವಾಗ  ಅಜ್ಜಿ  ಹೇಳ್ತಿದ್ದ  ಕತೆ , ಹಾಗೇ ಅವಳ ಕಾಲ ಮೇಲೆ ನಿದ್ದೆ  ಹೋಗ್ತಿರೋದು. ಪ್ರೀತಿ  ತುಂಬಿದ ಹೆದರಿಕೆಯೊಂದಿಗೆ  ಅಪ್ಪನಿಗಾಗಿ ಕಾಯ್ತಾ ಇರೋದು,ಆಜ್ಜ  ತರುವ ೫ ಪೈಸೆಯ ಆ ಚಿಕ್ಕ  ಬಿಸ್ಕೆಟ್ಗೆ  ಬೆಲೆ ಕಟ್ಟೋಕೆ  ಆಗ್ತದಾ .....?
      ಆಗ ಮನಸ್ಸಿನಲ್ಲಿ  ಒಂದು ಮುಗ್ದತೆಯಿತ್ತು. ಈಗ  ಆ ಜಾಗದಲ್ಲಿ ಸ್ವಲ್ಪ ಮಟ್ಟಿನ ಕ್ರೂರತೆ ,ಸ್ವಾರ್ಥತೆ ತುಂಬಿಕೊಂಡಿದೆ. ಚಿಕ್ಕ ಚಿಕ್ಕ ವಿಷ್ಯದಲ್ಲಿ  ಸಂತೋಷ ಪಡ್ತಿದ್ದ ಮನ  ಈಗ ಮತ್ತಷ್ಟೂ ಬೇಕು ಅನಿಸುವಷ್ಟರ ಮಟ್ಟಿಗೆ  ಹೋಗಿ ಕುಳಿತಿದೆ. ಹುಚ್ಚು ಆಸೆಗಳಿಗೆ ಮನ  ಜೋತು ಬಿದ್ದಿದೆ.ಮನಸ್ಸಿನಲ್ಲಿ  ಪ್ರೀತಿ  ಬತ್ತಿ ಹೋಗ್ತಿದೆ. ಯಾಕೆ  ಹೀಗೆ .......?ಇಲ್ಲೂ  ಅಷ್ಟೆ ನನ್ನಲ್ಲಿ  ಉತ್ತರ ಇಲ್ಲ.  ಇದೆಲ್ಲ ನನ್ನ  ಮನದ  ಗೊಂದಲಗಳು. ಉಳಿದವರಿಗೆ ಇದು ಗೋಜಲು ಅನಿಸಬಹುದು. ಮತ್ತೊಮ್ಮೆ  ಮಗುವಾಗುವ ಆಸೆ.  ಆ ಮುಗ್ದತೆ  ನನಗೆ ಬೇಕು.ಸ್ವಾರ್ಥ ಇಲ್ಲದ ಆ ನಗು ಬೇಕು ಅನಿಸ್ತಿದೆ. ಆದ್ರೆ ಇದೆಲ್ಲ ಈ ಸಿಲಿಕಾನ್ ಜನರಿಗೆ ಯಾಕೆ  ಅರ್ಥ ಆಗಲ್ಲ.

About Me



Expire ಮತ್ತು Renewalಗಳ ಮದ್ಯ ಸ್ನೇಹ ಮತ್ತು ಪ್ರೀತಿ

Expire ಮತ್ತು Renewalಗಳ ಮದ್ಯ ಸ್ನೇಹ ಮತ್ತು ಪ್ರೀತಿ
ಬದುಕಿನ ಪ್ರತಿ ಸಂಭಂದವು Renewal ಆಗ್ತಾಯಿರಬೇಕು ಇಲ್ಲದೇ ಹೋದರೇ Expire ಆಗಿಬಿಡುತ್ತೆ.
ಎಷ್ಟೊಂದು ನಿಜವಲ್ಲವೆ? ಬದುಕಿನಲ್ಲಿ ಪ್ರತಿ ದಿನವೂ ಹೋಸ ಸಂಭಂದಗಳು ಸೃಷ್ಟಿ ಆಗ್ತಾನೆ ಹೋಗುತ್ತಿರುತ್ತವೆ, ಹಾಗೆಯೇ ಎಷ್ಟೊ ಹಳೆಯ ಸಂಭಂದಗಳು ನರಳಿಕೆಯೇ ಇಲ್ಲದೇ ಸಾಯುತ್ತಿರುತ್ತವೆ. ಮೋನ್ನೆ ತಾನೇ ಸೇರಿದ ಕಂಪನಿಯಲ್ಲಿ ಪಕ್ಕದ Cubicalನವನ ಜೋತೆ ವಿಕೇಂಡನಲ್ಲಿ ಮೂವಿಗೆ ಹೋಗಲು ಪ್ಲಾನ ಮಾಡುವ ನಾವೇ, ಮೋನ್ನೆ ಮೋನ್ನೆಯವರೇಗೆ ಒಂದೇ ಬೆಂಚನಲ್ಲಿ ಜೋತೆಯಲ್ಲಿಯೇ ಕೂಡುತ್ತಿದ್ದ ಗೇಳೆಯನನ್ನು ಕರೆಯಲು ಮರೆಯುತ್ತೇವೆ. ಆಫಿಸಿಗೇ ಒಂದೇ ಬಸ್ಸಿನಲ್ಲಿ ಬರುವವರಿಗೆಲ್ಲ SMS ಕಳುಹಿಸುವ ನಾವು, ಹಾಸ್ಟೇಲಿನಲ್ಲಿ ರೂಮಮೇಟ ಆಗಿದ್ದವನ ನಂಬರ ಯಾವತ್ತೋ ಡಿಲಿಟ ಅಗಿದ್ದನ್ನು ಮರೇಯುತ್ತೇವೆ. ನಾವು ನೋಡಿಯೇ ಇರದ ಕ್ಲೈಂಟಗಳಿಗೆ ಕ್ರಿಸ್ಮಸ , ನ್ಯೂ ಇಯರಗೇ e-ಮೇಲ ಕಳುಹಿಸುವ ನಾವು, ಪರಿಕ್ಷೇಯ ಸಮಯದಲ್ಲಿ ತನ್ನ ನೋಟ್ಸ ಕೊಟ್ಟು ಓದಿಸಿದ ಗೆಳೆಯನ ಪೋಸ್ಟಲ ಅಡ್ರೇಸ್ಸನ್ನೇ ಮರೇಯುತ್ತೇವೆ.
ಪ್ರತಿ ಸಂಭಂದವು ಅಷ್ಟೆ ನೀರೆರೆಯದಿದ್ದರೆ ಒಣಗಿದ ಬಳ್ಳಿಯೇ, ಹೂವು ಅರಳದು, ಕಂಪು ಹರಡದು. ಗೆಳೆತನವೆಂಬುದು ಬಳ್ಳಿಯಿದ್ದಂತೆ ಅದು ಏಷ್ಟೆ ಬೆಳೆದರು ನೀರು ಹಾಕದಿದ್ದರೇ ಬಾಡುವುದೆ. ಹಾಗಾದರೇ ನಮ್ಮ ಗೆಳೆತನದ ಬಳ್ಳಿಗೆ ನೀರೆರೆಯೋಣ , ಮತ್ತೆ Reneval ಮಾಡೋಣ, Expiry Date ಸಮೀಪೀಸ್ತಾಯಿದೆ.
ನಾನಿಲ್ಲಿ ನಿನ್ನ e-ಮೇಲ ಹಾದಿಯನ್ನೆ ಕಾಯ್ತಾ ಕುಳಿತಿದ್ದೀನಿ ಅನ್ಕೊಬೇಡ, ನಾನೀಗ ನಿನ್ನ ನಂಬರನ್ನೇ ಡೈಯಲ್ ಮಾಡ್ತಯಿದ್ದೇನೆ.