Tuesday, May 17, 2011

Thursday, February 3, 2011

ಬಿಗಿದಪ್ಪಿಕೊಳ್ಳೆಯನ್ನ

ಬಿಗಿದಪ್ಪಿಕೊಳ್ಳೆಯನ್ನ
ಬಿಡದಂತೆ ಎಂದು ನನ್ನ
ಬಿರುಗಾಳಿಯಂತೆ ಈ ಪ್ರೇಮಿ
ನಡು   ನಡುಗಿ ನೋಡಲಿ ಭೂಮಿ

ಸೆಳೆವ ಸುಳಿಯಲಿ
ಗುಡಗು ಮಳೆಯಲಿ
ಬಿಗಿದಪ್ಪಿಕೊಳ್ಳೆಯನ್ನ
ಬಿಡದಂತೆ ಎಂದು ನನ್ನ

ಪ್ರೀತಿ  ಹೃದಯಗಳೆಕೋ ಭಾರ
ಆ ವಿದಿ ಆಟ ಬಲು ಕ್ರೂರ
ಆದರೇನು ಪ್ರೀತಿಗೆ ನಾವು ದೂರ
ಬಾ ತಿಳಿಸೋಣ ಪ್ರೀತಿಯ  ಸಾರ

ಪ್ರಳಯವಾಗಲಿ
ಸಮರವಾಗಲಿ
ಅಲೆಗಳು ಉರುಳಲಿ
ಬಿಗಿದಪ್ಪಿಕೊಳ್ಳೆಯನ್ನ
ಬಿಡದಂತೆ ಎಂದು ನನ್ನ

ತುಂಡು ಹಾಳೆಯ ಸ್ನೇಹ

ಕಸದ ಬುಟ್ಟಿಯ ಸೇರುವ ಮುನ್ನ
ಹರಿದು ತುಂಡಾದ ಹಾಳೆಯ ಮೇಲೆ
ಏನೋ ಬರೆಯುವಾ  ಮನಕ್ಕೆ

ಬರೆಯಲಾರೆ ತತ್ವ ಪದಗಳ
ಇದರಲಿ
ಬರೆಯಲಾರೆ ನೀತಿ ಗೀತಗಳ
ಇದರಲಿ
ಆದಾರೆ ಮರೆಯದೆ ಗೀಚುವೆ
ದಿರಲೆoದು
ತುಂಡು ಹಾಳೆಯ ಸ್ನೇಹ
ಕೊನೆಯಗದಿರಲೆoದು
ತುಂಡು ಹಾಳೆಯ ಮೋಹ
ಮರೆಮಾಚದಿರರೆಂದು

ವ್ಯರ್ಥವಾಗದಿರದಿರಲಿ ಬಾಳು
ವ್ಯರ್ಥವಾಗದಿರದಿರಲಿ ಬದುಕು

baredu kodu valava

Thursday, January 6, 2011

ಹಾಸ್ಯಗಳು

ಪ್ರೀತಿ ಕಡಿಮೆ ಆಗ್ತಾ ಇದೆರಮಾ-- ಬರ್ತಾ ಬರ್ತಾ ನನ್ನ ಗಂಡನಿಗೆ
ನನ್ನ ಮೇಲೆ ಪ್ರೀತಿ ಕಡಿಮೆ ಆಗ್ತಾ ಇದೆ.

ಉಮಾ-- ಹೇಗೆ ಹೇಳುತ್ತಿ?
ರಮಾ-- ಮೊದಲೆಲ್ಲ ಕಾಫಿ ತಗೊಂಡು ಬಂದು ನನ್ನನ್ನು ಎಬ್ಬಿಸ್ತಿದ್ರು,
ಈಗೇನಪ್ಪ ಅಂದರೆ ಎಬ್ಬಿಸಿ ಕಾಫಿ ಮಾಡು ಅಂತಾರೆ."


ಪಂಚರ್ ಆಗಿದೆ .ಡ್ರೈವರ್ ; ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ .
ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ
.


ಒಹ್ ಅತ್ತೆ ಮಾವಹೆಂಡತಿ ; (ಮನೆ ಹೊರಗೆ ೨ ಮಂಗ ಇರೋದನ್ನು ನೋಡಿ ) ರೀ ನಿಮ್ ನೆಂಟರು ಬಂದಿದಾರೆ ಹೋಗಿ ಮಾತನಾಡಿಸಿ.
ಗಂಡ ; ಬಾಗಿಲು ತೆರೆದು) ಒಹ್ ಅತ್ತೆ ಮಾವ ಯಾವಾಗ ಬಂದ್ರಿ?ಒಳಗೆ ಬನ್ನಿ.....

ಹನಿಗವನಗಳು

ಪ್ರತಿಯೊಂದಕ್ಕೂ                               

ಇಂಗ್ಲೀಷ್ ಉಗುಳುವ

ನಮ್ಮ ಹೆಂಗೆಳೆಯರಲ್ಲಿ

ನೀವು ಎಲ್ಲಿಯವರೆಂದು

ಕೇಳಿದರೆ ಹೇಳುವರು

WE
ದೇಶಿಯರು.


2.ಅವಾಂತರ     
                                  
ಕಾಲೇಜು ದಿನಗಳಲಿ

ನನ್ನನ್ನು ಕಂಡಾಗ ಮಾಡುತ್ತಿದ್ದಳು ಹಾಯ್

ಪ್ರೇಮ ಬೆಳೆಸಿ,ಮದುವೆಯಾಗುವೆನೆಂದಾಗ

ಎರಡು ವರ್ಷ ಕಳೆಯಲಿ ಎಂದಳಾಕೆ

ವರುಷ ಕಳೆದು ಮನೆಗೆ

ಹೋದೆ ನಾ, ಆಗ ಹೇಳಿದಳು

ನಾನೀಗ ಎರಡು ಮಕ್ಕಳ ತಾಯಿ.!!

ಸವಿನೆನಪು

ಮರೆತೇನಂದರ ಮರೆಯಲಿ ಹ್ಯಾಂಗ: "ನೆನಪುಗಳೇ ಕಾಡದಿರಿ please"

ನಿನ್ನೊಂದಿಗೆ ಕಳೆದ ದಿನಗಳು ಮರೆಯಲು ಸಾಧ್ಯವೇ? ನಿನ್ನ ಜೊತೆ ಕಳೆದ ಆ ಸುಂದರ ದಿನಗಳ ಸವಿನೆನಪುಗಳು, ಆ ಸುಂದರ ಸಂಜೆಗಳ ಒಡನಾಟ, ಆ ತುಂಟಾಟ... ಆ ನೆನಪುಗಳೇ ಹಾಗೆ ಬಿಟ್ಟು ಬಿಡದೆ ಕಾಡುತ್ತವೆ.
ನೆನಪುಗಳೇ ನೀವೇಕೆ ಹೀಗೆ? ಆಫೀಸಿನಲ್ಲಿ ದುಡಿದು ದಣಿದ ಕಣ್ಣುಗಳಿಗೆ ವಿಶ್ರಾಂತಿ ಕೊಡಲೆಂದು ಸ್ವಲ್ಪ ಕಣ್ಣರೆಪ್ಪೆ ಮುಚ್ಚಿದರೆ ಸಾಕು, ದಾಳಿ ಆರಂಭ. "ನೆನಪುಗಳೇ ಕಾಡದಿರಿ please". ಹೀಗೆನ್ನಲು ಕೂಡಾ ಭಯ.!!!
ನಾನು ಹಾಗೆ ಹೇಳಿದೆನೆಂದು ನೀವು ಮುನಿಸಿಕೊಂಡು ಬರದೇ ಹೋದರೆ?, ನಾನು ನನಗೆ ಮತ್ತೆ ಸಿಗದೇ ಕಳೆದು ಹೋಗಬಹುದು. ನಾನು "ನಾನೇ" ಎಂಬುದನ್ನು ಜ್ಞಾಪಿಸ ಲಾದರು ನೀವು ತಿರುಗಿ ಬರಬೇಕು. ಆದರೂ ಇಷ್ಟೊಂದು ಕಾಡದಿರಿ please. ನಾನು ಯಾರೆಂಬುದನ್ನು ಜ್ಞಾಪಿಸುತ್ತಾ, ನಾನೇನಾಗಬೇಕೊ ಅದನ್ನು ಮರೆಯಿಸದಿರಿ, ನನ್ನ ದಾರಿ ತಪ್ಪಿಸದಿರಿ ನೆನಪುಗಳೇ... ಅರ್ಜೆಂಟಾಗಿ ನಾನು ಏನೋ ಆಗಬೇಕಾಗಿದೆ, ಏನೋ ಸಾಧಿಸಬೇಕಾಗಿದೆ. ದೊಡ್ಡ ಊರಿಗೆ ಹೋದವನು ದೊಡ್ಡದಾಗಿ ಏನೋ ಸಾಧಿಸುತ್ತಾನೆಂದು ಮನೆಯಲ್ಲಿ ಎಲ್ಲರೂ "ಕನಸು" ಕಾಣುತ್ತಿದ್ದಾರೆ, ಅವರ ಕನಸುಗಳನ್ನು ಕೊಲ್ಲದಿರಿ ನೆನಪುಗಳೇ...
ಹಾಗೆಂದು ಬರದೇ ಹೋಗದಿರಿ, ನೀವಲ್ಲದೇ ಈ ಊರಲ್ಲಿ ನನಗಾರು ಹೇಳಿ? ಹೊಸ ಊರಲ್ಲಿ ಹೊಸ ಪರಿಚಯಗಳಾಗಬೇಕು, ಹೊಸ ಗೆಳೆತನ ಬೆಳೆಯಲೇಬೇಕು ಆದರೆ ಅದು ಹಳೆಯ ಗೆಳೆತನದ ಸಾವಲ್ಲ. ನೆನಪುಗಳೇ ದಯವಿಟ್ಟು ಮುನಿಯದಿರಿ, ಮುನಿದು ನನ್ನ ನೂಯಿಸದಿರಿ. ಈ ಹೊಸ ಗೆಳೆಯರು ಕೊಡಾ ಯಾವೊತ್ತೊ ಮುಂದೊಂದು ದಿನ ನಿಮ್ಮೊಡನೆ ಸೇರಿ ಮತ್ತೆ ನನ್ನನ್ನೇ ಕಾಡುತ್ತೀರಿ. ಕೊನೆಯಲ್ಲಿ ಒಂಟಿಯಾಗುವನು ನಾನೇ. "ನೆನಪುಗಳೇ ಕಾಡದಿರಿ please".
"ಬಾಳ ದಾರಿಯಲಿ ಬೇರೆಯಾದರೂ, ಚಂದಿರ ಬರುವನು ನಮ್ಮ ಜೊತೆ,
ಕಾಣುವೆನು ಅವನಲಿ ನೀನ್ನನೇ...
ಇರಲಿ ಗೇಳೆಯಾ... ಈ ಅನುಭಂದ ಹೀಗೆ ಸುಮ್ಮನೇ..."